ಅಭಿಪ್ರಾಯ / ಸಲಹೆಗಳು

ಕುಲಪತಿಗಳು

 

ಡಾ. ನಿರಂಜನ ವಾನಳ್ಳಿ- ಕಿರು ಪರಿಚಯ

     ಡಾ. ನಿರಂಜನ ವಾನಳ್ಳಿ ಉತ್ತರಕನ್ನಡ ಜಿಲ್ಲೆಯ ವಾನಳ್ಳಿ ಮೂಲದವರು. ಓದಿದ್ದು ವಾನಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆ, ಉಡುಪಿಯ ಎಂ.ಜಿ.ಎಂ. ಕಾಲೇಜು ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ, ಪತ್ರಿಕೋದ್ಯಮದಲ್ಲಿ ಎಂ.ಎ. ಪಿ.ಹೆಚ್.ಡಿ. ಪಡೆದಿದ್ದಾರೆ. ಉಜಿರೆಯ ಶ್ರಿ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಕೋದ್ಯಮ ವಿಭಾಗದ ಅಧ್ಯಾಪಕರಾಗಿ ಕೆಲಸ  ಆರಂಭ.   ಆರು ವರುಷಗಳ ಬಳಿಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗಕ್ಕೆ ಸೇರ್ಪಡೆ. ಒಟ್ಟು 33 ವರ್ಷಗಳಿಂದ ಪತ್ರಿಕೋದ್ಯಮ ಪಾಠ ಮಾಡಿದ  ಅನುಭವ ಜೊತೆಗೆ ಫ್ರೀಲಾನ್ಸ್ ಪತ್ರಕರ್ತರಾಗಿ ಮೂರುವರೆ ದಶಕದಿಂದ ಕನ್ನಡ ಹಾಗೂ ಇಂಗ್ಲೀಷ್ ಪತ್ರಿಕೆಗಳಿಗೆ ಬರೆದಿದ್ದಾರೆ. ಇದೀಗ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ 01ನೇ ಡಿಸೆಂಬರ್ 2021 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

      ಒಮಾನ್ ದೇಶದಲ್ಲಿ ಪತ್ರಕೋದ್ಯಮ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿರುವ ವಾನಳ್ಳಿಯವರು ಇತ್ತಿಚೆಗೆ ತಜಕಿಸ್ತಾನದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿ 15 ತಿಂಗಳು ಕಾರ್ಯ ನಿರ್ವಹಿಸಿರುತ್ತಾರೆ. ಅದಕ್ಕೂ ಮೊದಲು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವರಾಗಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ  ಎಲೆಕ್ಟ್ರಾನಿಕ್ ಮಲ್ಟಿಮೀಡಿಯಾ ರಿಸರ್ಚ್ ಸೆಂಟರ್ (EMRC) ಮತ್ತು ಸಾಮರ್ಥ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕರಾಗಿಯೂ ಅನುಭವ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿರುತ್ತಾರೆ.

     ಈವರೆಗೆ 35 ಪುಸ್ತಕಗಳನ್ನು ಬರೆದಿರುವ  ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೃಷ್ಣಾನಂದ ಕಾಮತ್ ಪುರಸ್ಕಾರ, ಶಿವಮೊಗ್ಗ ಕರ್ನಾಟಕ ಸಂಘದ ಪುರಸ್ಕಾರ, ಎಚ್ಚೆಸ್ಕೆ ಅಂಕಣ ಪ್ರಶಸ್ತಿ, ಅಮರವಾಣಿ ಪ್ರಶಸ್ತಿ ಮುಂತಾಗಿ ಹಲವು ಗೌರವಗಳಿಗೆ ಪಾತ್ರರಾಗಿರುತ್ತಾರೆ. 2016ರಲ್ಲಿ ಭಾರತ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಏರ್ಪಡಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ವಾನಳ್ಳಿಯವರು ಬರೆದು ನಿರ್ದೇಶಿಸಿದ ‘ಲೈಲಾ ಗೋಲ್ಡ್’ ಕಿರುಚಿತ್ರ ರಾಷ್ಟ್ರೀಯ ಪುರಸ್ಕಾರದ ಮನ್ನಣೆ ಪಡೆಯಿತು. ಈವರೆಗೆ 800ಕ್ಕೂ ಹೆಚ್ಚು ನುಡಿಚಿತ್ರಗಳನ್ನು ಬರೆದಿರುವ ವಾನಳ್ಳಿಯವರು ಅನೇಕ ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಯೂಟ್ಯೂಬ್ ನಲ್ಲಿ ಇವರ ‘ಫ್ರೀಲಾನ್ಸಿಯ ಕಥೆಗಳು’ ಮತ್ತು ‘ಕಾಡಿದ ಕಥೆ’ ಕಥಾ ಮಾಲಿಕೆಯು ಜನಪ್ರಿಯವಾಗಿದೆ. ವ್ಯಕ್ತಿತ್ವ ತರಬೇತಿದಾರರಾಗಿ ಚಂದನ ವಾಹಿನಿಯಲ್ಲಿ ಎರಡು ಬಾರಿ ಇವರ ಸಂದರ್ಶನ ಪ್ರಸಾರವಾಗಿದೆ.  ‘ಸಂವಹನ ಕೌಶಲ’  ಇವರ ಜನಪ್ರಿಯ ಪುಸ್ತಕವಾಗಿದ್ದು, ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಸಂವಹನ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿದೆ.  ‘ನಗರದಲ್ಲಿರಲಾರೆ, ಹಳ್ಳಿಗೆ ಹೋಗಲಾರೆ’ ಎಂಬ ಇವರ ಪ್ರಬಂಧ ಮಂಗಳೂರು ವಿಶ್ವವಿದ್ಯಾಲಯದ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಪಾಠವಾಗಿದೆ. ತಜಕಿಸ್ತಾನದಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಕಂಡ ಅನುಭವಗಳನ್ನು ಅವರು ‘ತಶಾಕುರ್ ತಜಕಿಸ್ತಾನ್’ಎಂಬ ಪುಸ್ತಕದಲ್ಲಿ ದಾಖಲಿಸಿದ್ದು, ಅದು ಇತ್ತೀಚೆಗೆ ಬಿಡುಗಡೆಯಾಗಿದೆ.

 

      

ಇತ್ತೀಚಿನ ನವೀಕರಣ​ : 07-03-2023 02:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080